ಹೋಮ್ ಹೀರೋ ಜೆನ್ಯೂನ್ ಪಾರ್ಟ್ಸ್
ಮೆನು

ಹೀರೋ ಜೆನ್ಯೂನ್ ಪಾರ್ಟ್ಸ್

ನಮ್ಮ ಗ್ರಾಹಕರ ಸಂತೋಷಕರ ಪ್ರಯಾಣವು ಹೀರೋ ಮೋಟೋಕಾರ್ಪಿನ ಬಿಸಿನೆಸ್ ತಂತ್ರದ ಪ್ರಮುಖ ಉದ್ದೇಶವಾಗಿದೆ ಮತ್ತು ಗ್ರಾಹಕರ 100% ತೃಪ್ತಿಯನ್ನು ಖಾತ್ರಿಪಡಿಸಲು ಹೀರೋ ಮೋಟೋಕಾರ್ಪ್ ಲಿಮಿಟೆಡ್ ನಮ್ಮ ಗ್ರಾಹಕರ ಬೇಡಿಕೆಯಾದ ಜೆನ್ಯೂನ್ ಪಾರ್ಟ್‌‌ಗಳನ್ನು ಮಾರಾಟ ಮಾಡಲು ಅದಕ್ಕೆಂದೇ ಮೀಸಲಾದ ಬಿಸಿನೆಸ್ ಘಟಕವನ್ನು ಹೊಂದಿದೆ

ಹೀರೋ ಜೆನ್ಯೂನ್ ಪಾರ್ಟ್‌ಗಳನ್ನು ಜನಪ್ರಿಯವಾಗಿ HGP ಎಂದು ಕರೆಯಲಾಗುತ್ತದೆ. ನೀವು ಈಗ ನಮ್ಮ ಹೊಸದಾಗಿ ಪ್ರಾರಂಭಿಸಲಾದ ಪೋರ್ಟಲ್‌ eshop.heromotocorp.comನಿಂದ ನೇರವಾಗಿ ಹೀರೋ ಜೆನ್ಯೂನ್ ಪಾರ್ಟ್‌ಗಳನ್ನು ಖರೀದಿಸಬಹುದು.

ದೃಷ್ಟಿ : "ಯಾವುದೇ ಗ್ರಾಹಕರು ಅವರಿಗೆ ಬೇಕಾದ ಪಾರ್ಟ್‌‌ಗಾಗಿ ಕಾಯಬೇಕಾಗಿಲ್ಲ"

ನಮ್ಮ ಗ್ರಾಹಕರಿಗೆ ಎಂದಿಗೂ ಕೊನೆಗೊಳ್ಳದ ಸಂತೋಷಕರ ಅನುಭವವನ್ನು ಒದಗಿಸುವ ಉದ್ದೇಶವು ಹೀರೋ ಮೋಟೋಕಾರ್ಪಿನ ನಮ್ಮ ವ್ಯಾಪ್ತಿಯನ್ನು ಹೆಚ್ಚಿಸುವುದು, ಉದ್ಯಮದ ಮಾನದಂಡಗಳನ್ನು ಸ್ಥಾಪಿಸುವುದು ಮತ್ತು ಮಾಲೀಕತ್ವದ ಕಡಿಮೆ ವೆಚ್ಚವನ್ನು ಖಚಿತಪಡಿಸುವುದರ ಮೇಲೆ ನಿರಂತರ ಗಮನವನ್ನು ಹೊಂದಿದೆ.

ನಮ್ಮ ವ್ಯಾಪ್ತಿಯನ್ನು ಹೆಚ್ಚಿಸುವುದು

ಹೀರೋ ಮೋಟೋಕಾರ್ಪ್‌ನಲ್ಲಿ, ಬಹುಸ್ತರದ ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕ ಮತ್ತು ಅಗಾಧವಾಗಿ ಕಾಣಿಸಿಕೊಳ್ಳುವುದವುಗಳಲ್ಲಿ ಅದು ಒಂದು ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಒಂದು ಪರಿಣಾಮಕಾರಿ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದೇವೆ. ಸದಾ ಹೆಚ್ಚುತ್ತಲೇ ಇರುವ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು, ಬದಲಾಗುತ್ತಿರುವ ವಾಸ್ತವಸ್ಥಿತಿಗಳಿಗೆ ಪ್ರತಿಸ್ಪಂದಿಸುವುದಕ್ಕೆ ನಾವು ಗ್ರಾಹಕರ ಟಚ್ ಪಾಯಿಂಟ್‌‌ಗಳ ಸಂಪೂರ್ಣ ನೆಟ್ವರ್ಕ್ ಅನ್ನು ನಿರಂತರವಾಗಿ ಬಲಪಡಿಸುತ್ತಿದ್ದೇವೆ. HGP ಗಳನ್ನು 95 ಕ್ಕೂ ಹೆಚ್ಚು ಬಿಡಿಭಾಗಗಳ ವಿತರಕರು, 800 ಅಧಿಕೃತ ಡೀಲರುಗಳು ಮತ್ತು ಭಾರತದಾದ್ಯಂತ 1300 ಅಧಿಕೃತ ಸೇವಾ ಕೇಂದ್ರಗಳು ಮತ್ತು ವಿಶ್ವದಾದ್ಯಂತ ಸುಮಾರು 35 ದೇಶಗಳಲ್ಲಿ 6000 ಕ್ಕಿಂತ ಹೆಚ್ಚು ಟಚ್ ಪಾಯಿಂಟ್ ಗಳ ಒಂದು ವ್ಯಾಪಕವಾದ ನೆಟ್ ವರ್ಕ್ ಮೂಲಕ ವಿತರಿಸಲಾಗಿದೆ. ನಿಮ್ಮ ಅತೀ ಸಮೀಪದ ಟಚ್ ಪಾಯಿಂಟ್ ಅನ್ನು ಗುರುತಿಸಲು ಇಲ್ಲಿ ಕ್ಲಿಕ್ ಮಾಡಿ. ನಾವು ಗ್ರಾಹಕರಿಗೆ ನಿರಂತರವಾಗಿ ಸೇವೆ ಸಲ್ಲಿಸುವ ಉತ್ಸಾಹವನ್ನು ನೀವು ಕೂಡ ಹಂಚಿಕೊಳ್ಳಬೇಕೆಂದು ಬಯಸಿದರೆ, ಒಬ್ಬ ಬಿಡಿಭಾಗಗಳ ವಿತರಕ ಮತ್ತು ಹೀರೋ ಮೋಟೋಕಾರ್ಪ್ ಕುಟುಂಬದ ಒಂದು ಭಾಗವಾಗಿರಲು ಇಲ್ಲಿ ಅಪ್ಲೈ ಮಾಡಿ.

ಉದ್ಯಮದ ತನ್ನದೇ ಗುರುತುಗಳನ್ನು ಸೆಟ್ ಮಾಡಲಾಗುತ್ತಿದೆ

ನಿಮ್ಮ ಹೀರೋ ದ್ವಿಚಕ್ರ ವಾಹನಗಳಿಗೆ ಹೀರೋ ಜೆನ್ಯೂನ್ ಪಾರ್ಟ್‌‌ಗಳು ಮಾತ್ರ ಪ್ರಮಾಣೀಕರಿಸಲ್ಪಟ್ಟ ಬಿಡಿಭಾಗಗಳಾಗಿವೆ. ಸುಧಾರಿಸಿದ ಮತ್ತು ಸರಿಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನಿಮಗೆ ಒದಗಿಸಲು ನಿಮ್ಮ ಬೈಕ್‌ಗೆ ಒಂದು ಪರಿಪೂರ್ಣ ಹೊಂದಿಕೆಯಾಗಿ ಅವುಗಳನ್ನು ನಿಖರತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಪ್ರತೀ ಬಿಡಿಭಾಗವು ಒಂದು ಹೀರೋ ಜೆನ್ಯೂನ್ ಪಾರ್ಟ್ ಆಗುವ ಮೊದಲು ಒಂದು ನಿರ್ಣಾಯಕ ಗುಣಮಟ್ಟದ ಚೆಕ್ ಪಾಯಿಂಟ್‌ಗಳ ಕಠಿಣ ಪರೀಕ್ಷೆಗೆ ಒಳಗಾಗುತ್ತದೆ.. ಈ ಬಿಡಿಭಾಗಗಳು ಈಗ ನೀಮ್ರಾನ್‌‌ನ ಗ್ಲೋಬಲ್ ಪಾರ್ಟ್ಸ್ ಸೆಂಟರ್ (GPC) ಮೂಲಕ ಕೂಡ ಸರಬರಾಜಾಗುತ್ತಿದೆ.

GPC ಭವಿಷ್ಯದ ಸಾಧ್ಯತೆಗಳನ್ನು ಪ್ರದರ್ಶಿಸುತ್ತದೆ . ಅಪ್ಪಟ ಹೊಸದಾದ ವ್ಯವಸ್ಥೆಗಳೊಂದಿಗಿನ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವು ಸರಬರಾಜು ಸರಪಳಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದಲ್ಲದೆ ಒಂದು ಆಹ್ಲಾದಕರ, ಆರೋಗ್ಯಕರ ಮತ್ತು ಸುಂದರವಾದ ಕೆಲಸದ ವಾತಾವರಣವನ್ನು ಕೂಡ ಒದಗಿಸುತ್ತದೆ. ಸುಮಾರು 35 ಎಕರೆಗಳಲ್ಲಿ ವಿಸ್ತಾರಗೊಂಡಿರುವ GPC, ಜೊತೆಗೆ ಸಮಾನವಾಗಿ ತುಂಬಾ ದೊಡ್ಡದಾಗಿರುವ ಹೀರೋ ಗಾರ್ಡನ್ ಫ್ಯಾಕ್ಟರಿ ಇವು ಭಾರತದ ರಾಜಸ್ಥಾನ ರಾಜ್ಯದಲ್ಲಿರುವ ಹೀರೋ ನೀಮ್ರಾನಾ ಕಾಂಪ್ಲೆಕ್ಸ್‌ನ ಒಂದು ಅವಿಭಾಜ್ಯ ಅಂಗವಾಗಿದೆ. ನೇರ ಉತ್ಪಾದನಾ ವ್ಯವಸ್ಥೆಗಳ ಆಧಾರದ ಮೇಲೆ, ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುವಾಗ ಹಸ್ತಚಾಲಿತ ಮಧ್ಯಪ್ರವೇಶಿಸುವಿಕೆಯವನ್ನು ಕನಿಷ್ಠಗೊಳಿಸುವ ಹಾಗೆ GPC ಯನ್ನು ವಿನ್ಯಾಸಗೊಳಿಸಲಾಗಿದೆ .. ಈ ತಾಂತ್ರಿಕ ಮಾರ್ವೆಲ್ ಆಟೋ ಸೆಕ್ಟರಿನಲ್ಲಿ ಒಂದು ಹೊಸ ಕೈಗಾರಿಕಾ ಮಾನದಂಡವಾಗಿದೆ. ಒಂದು ಕಸ್ಟಮೈಸ್ ಮಾಡಿದ ಮತ್ತು ವಿಶಿಷ್ಟವಾದ ಗೋದಾಮಿನ ನಿರ್ವಹಣಾ ವ್ಯವಸ್ಥೆಯ ಮೂಲಕ ಬಿಡಿಭಾಗಗಳ ಆನ್‌ಲೈನ್ ಟ್ರ್ಯಾಕಿಂಗ್‌ನಿಂದ ನಿಯಂತ್ರಿಸಲ್ಪಡುವ ಯುನಿ-ಶಟಲ್ ಮತ್ತು ರೈಲ್ ಗೈಡೆಡ್ ಮೆಟೀರಿಯಲ್ ಚಲನೆ ವ್ಯವಸ್ಥೆಗಳಂತಹ ಇತರ ಹೊಸ ಯುಗದ ಪರಿಕಲ್ಪನೆಗಳಲ್ಲದೆ ಸ್ವಯಂಚಾಲಿತ ಸಂಗ್ರಹ ಮತ್ತು ಮರುಪಡೆಯುವಿಕೆ ವ್ಯವಸ್ಥೆ(ASRS) ಮತ್ತು ಸ್ವಯಂಚಾಲಿತ ಪ್ಯಾಕೇಜಿಂಗ್ ಮತ್ತು ವಿಂಗಡಿಸುವ ವ್ಯವಸ್ಥೆಗಳಿಂದ ಇದು ಸಜ್ಜುಗೊಂಡಿದೆ. ಹಸಿರು ಕಟ್ಟಡ ಪರಿಕಲ್ಪನೆಯನ್ನು ಅನುಸರಿಸಿ, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (IGBC) ಗಾರ್ಡನ್ ಫ್ಯಾಕ್ಟರಿಯನ್ನು ಒಂದು ಪ್ಲಾಟಿನಂ ಕ್ಲಾಸ್ ಉತ್ಪಾದನಾ ಸೌಲಭ್ಯ ಎಂಬುದಾಗಿ ಮಾನ್ಯತೆ ನೀಡಿದೆ.

ಮಾಲೀಕತ್ವದ ಕಡಿಮೆ ವೆಚ್ಚ

ಹೀರೋ ಮೋಟೋಕಾರ್ಪ್ ಅದರ ಪ್ರಾಡಕ್ಟ್‌‌ಗಳು, ಬಿಡಿಭಾಗಗಳು ಮತ್ತು ಸೇವೆಗಳ ಮೂಲಕ ಗ್ರಾಹಕರ ಅನುಭವವನ್ನು ಸುಧಾರಿಸುವಲ್ಲಿ ಬದ್ಧವಾಗಿರುವುದು ಮಾತ್ರವಲ್ಲ ಒಂದು 2 ವೀಲರ್‌ನ ಒಟ್ಟು ಮಾಲೀಕತ್ವದ ವೆಚ್ಚವನ್ನು ಕಡಿಮೆ ಮಾಡಲೂ ಕೂಡ ಗಮನ ಹರಿಸುತ್ತದೆ. ಹಾಗಾಗಿ ಅನ್ವೇಷಣೆಯು ಪ್ರಾಡಕ್ಟ್ ಅನ್ನು ಪಡೆಯುವುದು, ಇನ್‌ಸ್ಟಾಲ್ ಮಾಡುವುದು, ಬಳಸುವುದು, ನಿರ್ವಹಿಸುವುದು ಮತ್ತು ಬದಲಾಯಿಸುವ ವೆಚ್ಚಗಳನ್ನು ಒಳಗೊಂಡಿರುತ್ತದೆ. ಈ ಮೂಲ ಉದ್ದೇಶವನ್ನು ಪೂರೈಸಲು, ಬಿಡಿಭಾಗಗಳನ್ನು ಬದಲಿಸುವುದಕ್ಕೆ ತಗುಲುವ ನಮ್ಮ ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡಲು ಉತ್ತಮ ಗುಣಮಟ್ಟದ ಮಾನದಂಡಗಳ ಹೊರತಾಗಿಯೂ ಸಂಪೂರ್ಣ HGP ಪೋರ್ಟ್‌ಫೋಲಿಯೋ ಕೈಗೆಟುಕುವ ರೀತಿಯ ಬೆಲೆಯನ್ನು ಹೊಂದಿದೆ.

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018

ವಾಟ್ಸಾಪ್‌ನಲ್ಲಿ ಕನೆಕ್ಟ್ ಆಗಲು QR ಕೋಡನ್ನು ಸ್ಕ್ಯಾನ್ ಮಾಡಿ