ಸ್ಪಾರ್ಕ್ ಪ್ಲಗ್ ಇಗ್ನಿಷನ್ ಸಿಸ್ಟಮ್ನ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಹೆಚ್ಚಿನ ವೋಲ್ಟೇಜ್ ಮತ್ತು ದಹನದಿಂದಾಗಿ ನಾಶಕಾರಿ ಆಕ್ಸಿಡೀಕರಣದ ಪುನರಾವರ್ತಿತ ವಿಸರ್ಜನೆಯಿಂದಾಗಿ ಸ್ಪಾರ್ಕ್ ಪ್ಲಗ್ನ ವಿದ್ಯುದ್ವಾರಗಳು ಸವೆಯುತ್ತವೆ, ಇದರಿಂದಾಗಿ ಪ್ಲಗ್ ಅಂತರವು ಕ್ರಮೇಣ ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ಪ್ರತಿ 12000 ಕಿಲೋಮೀಟರ್ಗಳಲ್ಲಿ ಒಂದು ಬಾರಿ ಸ್ಪಾರ್ಕ್ ಪ್ಲಗನ್ನು ಬದಲಾಯಿಸಲು ಶಿಫಾರಸು ಮಾಡಲಾಗುತ್ತದೆ, ಏಕೆಂದರೆ ಈ ಹೊತ್ತಿಗೆ ಅದು ಹದಗೆಡುತ್ತದೆ. ಅಂತಹ ಸ್ಪಾರ್ಕ್ ಪ್ಲಗ್ ಅನ್ನು ದೀರ್ಘಾವಧಿಗೆ ಬಳಸುವುದರಿಂದ ಸ್ಟಾರ್ಟಿಂಗ್ ಟ್ರಬಲ್, ಮಿಸ್ಫೈರಿಂಗ್, ಪವರ್ ಕೊರತೆ ಮತ್ತು ಹೆಚ್ಚಿನ ಇಂಧನ ಬಳಕೆ ಮತ್ತು ಹೊರಸೂಸುವಿಕೆಗೆ ಕಾರಣವಾಗುತ್ತದೆ. ವಿಪರೀತವಾಗುವ ಸಂದರ್ಭದಲ್ಲಿ, ಬದಲಿಯೇ ಒಂದು ಸಂಭವನೀಯ ಪರಿಹಾರವಾಗಿ ನಿಮ್ಮ ಮುಂದೆ ಇರಬಹುದು.
HGP ಸ್ಪಾರ್ಕ್ ಪ್ಲಗ್ಗಳನ್ನು ನಿಮ್ಮ ಹೀರೋ ವಾಹನಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ದೀರ್ಘಾವಧಿ ಸಮಸ್ಯೆ ಮುಕ್ತ ರೈಡ್ ಖಚಿತಪಡಿಸಿಕೊಳ್ಳಬಹುದು. ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಅತೀ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಏರ್ ಫಿಲ್ಟರ್, ಎಂಜಿನ್ ಭಾಗಗಳನ್ನು ರಕ್ಷಿಸಲು ಗಾಳಿಯಲ್ಲಿನ ಕಣಗಳನ್ನು ಮತ್ತು ಧೂಳನ್ನು ಫಿಲ್ಟರ್ ಮಾಡುತ್ತದೆ. ಸಾಮಾನ್ಯವಾಗಿ ಇದು ಕಣಗಳು ಮತ್ತು ದೀರ್ಘಾವಧಿಯ ಬಳಕೆಯ ಕಾರಣದಿಂದಾಗಿ ಕೆಲ ಸಮಯದಲ್ಲಿ ಮುಚ್ಚಲ್ಪಡುತ್ತದೆ.
ಹೀರೋ ಮೋಟೋಕಾರ್ಪ್ ವಾಹನಗಳು ಮೂಲತಃ ಮೂರು ವಿಭಿನ್ನ ರೀತಿಯ ಏರ್ ಫಿಲ್ಟರ್ಗಳನ್ನು ಹೊಂದಿವೆ, ಅವುಗಳು ಪಾಲಿಯುರೆಥೇನ್ ತೇವದ ಮಾದರಿ, ಒಣಗಿದ ಪೇಪರ್ ಮತ್ತು ಅಂಟುಅಂಟಾದ ಕಾಗದದ ಮಾದರಿ. ಪಾಲಿಯುರೆಥೇನ್ ಮತ್ತು ಡ್ರೈ ಪೇಪರ್ ಫಿಲ್ಟರ್ಗಳಿಗೆ ಆವರ್ತಕ ಶುಚಿಗೊಳಿಸುವ ಅಗತ್ಯವಿರುತ್ತದೆ. ಪಾಲಿಯುರೆಥೇನ್ ಹಾನಿಗೊಳಗಾದ ನಂತರ ಅದನ್ನು ಬದಲಿಸುವ ಅಗತ್ಯವಿದ್ದರೆ, ಒಣಗಿದ ಪೇಪರ್ ಫಿಲ್ಟರ್ಗೆ ಪ್ರತಿ 12000 ಕಿ.ಮೀ.ಗೆ ಒಮ್ಮೆ ಬದಲಿ ಅಗತ್ಯವಿರುತ್ತದೆ. ಅಂಟುಅಂಟಾದ ಮಾದರಿಯನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ ಮತ್ತು ಪ್ರತಿ 15000 ಕಿ.ಮೀ.ಗೆ ಒಮ್ಮೆ ಬದಲಿ ಮಾಡಲು ಶಿಫಾರಸು ಮಾಡಲಾಗುತ್ತದೆ. ಧೂಳಿನ ಸ್ಥಿತಿಯಲ್ಲಿ ಬಳಸುವಾಗ ಹೆಚ್ಚು ಆಗಾಗ್ಗೆ ಸ್ವಚ್ಛಗೊಳಿಸುವಿಕೆ ಅಥವಾ ಆರಂಭಿಕ ಬದಲಿ ಅಗತ್ಯವಿರಬಹುದು.
ಶಿಫಾರಸು ಮಾಡಲಾದ ವೇಳಾಪಟ್ಟಿಯನ್ನು ಅನುಸರಿಸದಿದ್ದರೆ, ಅದು ಎಂಜಿನ್ ಪವರ್ ಕೊರತೆ, ಕಡಿಮೆ ಇಂಧನ ದಕ್ಷತೆ ಮತ್ತು ಅಕಾಲಿಕ ಎಂಜಿನ್ ವೈಫಲ್ಯದ ಕಾರಣದಿಂದಾಗಿ ದುಬಾರಿ ದುರಸ್ತಿಗೆ ಕಾರಣವಾಗಬಹುದು.
ನೈಜವಲ್ಲದ ಏರ್ ಫಿಲ್ಟರ್ಗಳನ್ನು ಬಳಸುವುದರಿಂದ ಫಿಲ್ಟರಿಂಗ್ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ತೆರೆದ ಮಾರುಕಟ್ಟೆಯಲ್ಲಿ ಹಲವಾರು HGP ಗಳಂತೆ ಕಾಣುವ ಫಿಲ್ಟರ್ಗಳು ಲಭ್ಯವಿವೆ, ಅವು ಅಲ್ಪ ಗುಣಮಟ್ಟದ್ದಾಗಿರುತ್ತವೆ. ಅಂತಹ ಫಿಲ್ಟರ್ಗಳು ಸಾಮಾನ್ಯ ಬಳಕೆಯಲ್ಲಿಯೂ ಕೆಟ್ಟು ಹೋಗುತ್ತವೆ, ಇದರಿಂದಾಗಿ ಫಿಲ್ಟರ್ಗಳು ಕುಗ್ಗುವುದರೊಂದಿಗೆ ಅವುಗಳ ಸೀಲಿಂಗ್ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ. ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಾಳಿಕೆಯನ್ನು ಹೆಚ್ಚಿಸಲು ಕೇವಲ HGP ಜೆನ್ಯೂನ್ ಏರ್ ಫಿಲ್ಟರ್ ಅನ್ನು ಬಳಸಿ. ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಇಂಧನ ಟ್ಯೂಬ್ ಒಂದು ಜಾಯಿಂಟ್ ಆಗಿದ್ದು, ಇದರ ಮೂಲಕ ಇಂಧನ ಟ್ಯಾಂಕ್ನಿಂದ ಕಾರ್ಬ್ಯುರೇಟರ್ಗೆ ನಿರಂತರ ಇಂಧನ ಹರಿವು ನಡೆಯುತ್ತದೆ.
ಒಂದು ಫ್ಯೂಯಲ್ ಟ್ಯೂಬಿಗೆ ಸಾಮಾನ್ಯವಾಗಿ 4 ವರ್ಷ ಸರಾಸರಿ ಬದಲಿ ಸಮಯವೆಂದು ಶಿಫಾರಸು ಮಾಡಲಾಗಿದೆ. ಕೆಲವು ಅಸಾಧಾರಣ ಸಂದರ್ಭಗಳಲ್ಲಿ ಸುಮಾರು 6 ತಿಂಗಳುಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಳಕೆ ಮಾಡದ ವಾಹನಗಳಿಗೆ ಫ್ಯೂಯಲ್ ಕೊಳವೆಯನ್ನು ಬದಲಾಯಿಸಬೇಕು.
ಆಂತರಿಕವಾಗಿ ಹೆಚ್ಚು ಆವಿಯಾಗುವ ಗುಣದಿಂದ ಫ್ಯೂಯಲ್ನ ನಿರಂತರ ಹರಿವು ಕ್ಷೀಣಿಸುತ್ತದೆ ಮತ್ತು ಫ್ಯೂಯಲ್ ಟ್ಯೂಬ್ ಜಾಯಿಂಟ್ಗಳಿಂದ ಲೀಕ್ ಆಗಲು ಆರಂಭವಾಗುತ್ತದೆ. ಇದನ್ನು ಫ್ಯೂಯಲ್ ವಾಸನೆಯಿಂದ ಗುರುತಿಸಬಹುದು.
HGP ಯ ಫ್ಯೂಯಲ್ ಕೊಳವೆಯನ್ನು ಮೆಟೀರಿಯಲ್ಗಳ ವಿವಿಧ ಲೇಯರ್ಗಳಿಂದ ತಯಾರಿಸಲಾಗಿದೆ, ಇದು ಆಂತರಿಕವಾಗಿ ಫ್ಯೂಯಲ್ ವಿರುದ್ಧ ಕ್ಷೀಣಿಸುವುದನ್ನು ತಡೆಯುತ್ತದೆ ಮತ್ತು ವಿವಿಧ ಹವಾಮಾನ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುತ್ತದೆ. ಇಂಧನ ಟ್ಯೂಬ್ನ ಎರಡೂ ಎಂಡ್ಗಳು ಒಂದು ವೈರ್ ಕ್ಲಿಪ್ನೊಂದಿಗೆ ಕನೆಕ್ಟ್ ಆಗುವಂತೆ ಶಿಫಾರಸು ಮಾಡಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಎಂಜಿನ್ ತೈಲದ ನಿರಂತರ ಬಳಕೆಯು 'ಲೂಬ್ರಿಕೇಟ್' ಮತ್ತು 'ಕ್ಲೀನ್' ಮಾಡುವ ಸಾಮರ್ಥ್ಯವನ್ನು ತೀವ್ರವಾಗಿ ಕುಗ್ಗಿಸುತ್ತವೆ, ಇದರಿಂದಾಗಿ ಸಾಮಾನ್ಯ ಎಂಜಿನ್ ಕಾರ್ಯವನ್ನು ನಿರ್ವಹಿಸುವುದು ಅಸಾಧ್ಯವಾಗುತ್ತದೆ.
ಸಾಮಾನ್ಯವಾಗಿ, ಪ್ರತಿ 3000 ಕಿಲೋಮೀಟರ್ಗಳಲ್ಲಿ ಒಂದು ಬಾರಿ ಪ್ರತಿ 6000 ಕಿ.ಮೀ.ಗಳಲ್ಲಿ ತುಂಬಿಸುವುದರೊಂದಿಗೆ ಎಂಜಿನ್ ಆಯಿಲ್ ಬದಲಾವಣೆ ಮಾಡಬೇಕು.
ಮೇಲಿನ ವೇಳಾಪಟ್ಟಿಯನ್ನು ಅನುಸರಿಸದಿದ್ದರೆ, ಕಳಪೆ ಕಾರ್ಯಕ್ಷಮತೆ ಮತ್ತು ಫ್ಯೂಯಲ್ ಎಕಾನಮಿಗೆ ಕಾರಣವಾಗಬಹುದು. ಇದನ್ನು ಎಂಜಿನ್ ಮಿತಿಮೀರಿ ಬಿಸಿಯಾಗುವುದು ಮತ್ತು ಶಬ್ದ ಮಟ್ಟಗಳಲ್ಲಿನ ಹೆಚ್ಚಳದ ಸೂಚನೆಯಿಂದ ಕಾಣಬಹುದು. ವಿಪರೀತ ಎಂಬಂತಹ ಸಂದರ್ಭಗಳಲ್ಲಿ, ಇದು ಅಂತಿಮವಾಗಿ ಒಟ್ಟು ಎಂಜಿನ್ ವೈಫಲ್ಯಕ್ಕೆ ಕಾರಣವಾಗಿ ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ರಿಪೇರಿಗೆ ಎಡೆಮಾಡಿಕೊಡಬಹುದು.
HGP ಶಿಫಾರಸು ಮಾಡಿದ 10W30 SJ JASO MA ಎಂಜಿನ್ ತೈಲದ ಉತ್ಕೃಷ್ಟ ಗುಣಲಕ್ಷಣಗಳು:-
• ಸಮರ್ಥ ಲೂಬ್ರಿಕೇಟಿಂಗ್, ಕ್ಲೀನಿಂಗ್, ಕೂಲಿಂಗ್ ಮತ್ತು ಸೀಲಿಂಗ್ ಸಾಮರ್ಥ್ಯಗಳು.
• ಉತ್ತಮ ಕೋಲ್ಡ್ ಸ್ಟಾರ್ಟಿಂಗ್ ಸಾಮರ್ಥ್ಯ
• ಸುಧಾರಿತ ಡ್ರೈನ್ ಅವಧಿ
• ಪರಿಸರ ಸ್ನೇಹಿ
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ತೆರೆದ ಮಾರುಕಟ್ಟೆಯಲ್ಲಿ 10W30 ರ ವಿವಿಧ ಗ್ರೇಡ್ಗಳು ಲಭ್ಯವಿವೆ. 10W30 SJ JASO MA ಗ್ರೇಡ್ ಎಂಜಿನ್ ಆಯಿಲ್ ವಿಶೇಷತೆ ಎಂದರೆ:-
• ಸಮರ್ಥ ಲೂಬ್ರಿಕೇಟಿಂಗ್, ಕ್ಲೀನಿಂಗ್, ಕೂಲಿಂಗ್ ಮತ್ತು ಸೀಲಿಂಗ್ ಸಾಮರ್ಥ್ಯಗಳು.
• ಉತ್ತಮ ಕೋಲ್ಡ್ ಸ್ಟಾರ್ಟಿಂಗ್ ಸಾಮರ್ಥ್ಯ
• ಸುಧಾರಿತ ಡ್ರೈನ್ ಅವಧಿ
• ಪರಿಸರ ಸ್ನೇಹಿ
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಡ್ರೈವ್ ಚೈನ್ ಬಾಳಿಕೆಯು ಸರಿಯಾದ ಲೂಬ್ರಿಕೇಶನ್ ಮತ್ತು ಹೊಂದಾಣಿಕೆಯ ಮೇಲೆ ಅವಲಂಬಿತವಾಗಿದೆ. ಇಲ್ಲದಿದ್ದರೆ, ಅದು ಅಕಾಲಿಕ ಸವೆತಕ್ಕೆ ಕಾರಣವಾಗುತ್ತದೆ. ಸವೆದ ಸ್ಪ್ರಾಕೆಟ್ಗಳು ಡ್ರೈವ್ ಚೈನ್ ಅನ್ನು ಹರಿದುಬಿಡುತ್ತವೆ, ಇದು ವಾಹನದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಮೋಟಾರ್ ಸೈಕಲ್ನ ಒರಟು ಚಾಲನೆ ಮತ್ತು ಚೈನ್ನ ಶಬ್ದವು ಚೈನ್ ಸ್ಪ್ರಾಕೆಟ್ ಕಿಟ್ ಅನ್ನು ಬದಲಿಸಬೇಕಾಗಿದೆ ಎಂಬ ಸೂಚಕಗಳಾಗಿವೆ.
ತೀವ್ರವಾಗಿ ಸವೆದರೆ, ಚಾಲನೆಯಲ್ಲಿರುವಾಗ ಡ್ರೈವ್ ಚೈನ್ ಹೊಯ್ದಾಡುವಿಕೆಗೆ ಕಾರಣವಾಗಬಹುದು, ಸ್ಪ್ರಾಕೆಟ್ನಿಂದ ನೆಲೆತಪ್ಪಿಸಬಹುದು ಮತ್ತು ಸವಾರರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವಂತೆ ಘಟಕಗಳನ್ನು ಹಾನಿಗೊಳಿಸಬಹುದು. ಅಲ್ಲದೆ ಇದು ಕಳಪೆ ಇಂಧನ ದಕ್ಷತೆಗೆ ಕಾರಣವಾಗಬಹುದು ಮತ್ತು ಚಾಲನೆಯ ಮೇಲೆ ಪರಿಣಾಮ ಬೀರಬಹುದು.
HGPಯ ಚೈನ್ ಸ್ಪ್ರಾಕೆಟ್ ಕಿಟ್ಗಳನ್ನು ಗುಣಮಟ್ಟದಲ್ಲಿ ಉತ್ತಮವಾಗಿ ಮಾಡಲಾಗಿದೆ ಮತ್ತು ದೀರ್ಘಾವಧಿ ಕಾರ್ಯಕ್ಷಮತೆಗಾಗಿ ಚೆನ್ನಾಗಿ ಪರೀಕ್ಷಿಸಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಡ್ರೈವ್ ಬೆಲ್ಟ್ ಯಾವಾಗಲೂ ರಾಟೆಯಂತಹ ಸಾಧನದೊಂದಿಗೆ ಸಂಪರ್ಕದಲ್ಲಿರುತ್ತದೆ. ಆದ್ದರಿಂದ ಒಂದು ಕಾಲಾವಧಿಯಲ್ಲಿ ಅತಿಯಾದ ಸವೆತಗೊಂಡಾಗ ಅದನ್ನು ಬದಲಾಯಿಸಬೇಕಾಗುತ್ತದೆ. ಅಲ್ಲದೆ, ಇದನ್ನು ರಬ್ಬರ್ನಿಂದ ಮಾಡಲ್ಪಟ್ಟಿರುವುದರಿಂದ ಘರ್ಷಣೆಯಿಂದಾಗಿ ಓಜೋನ್ ಮತ್ತು ಹೀಟ್ನಿಂದ ಅದು ಗಟ್ಟಿಯಾಗುತ್ತದೆ ಮತ್ತು ಕ್ಷೀಣಿಸುತ್ತದೆ.
ಶಿಪಾರಸು ಮಾಡಿದ ಡ್ರೈವ್ ಬೆಲ್ಟ್ನ ರಿಪ್ಲೇಸ್ಮೆಂಟ್ ಅವಧಿ ಪ್ರತಿ 24000 ಕಿಲೋ ಮೀಟರಿಗೆ ಒಮ್ಮೆ ಆಗಿರುತ್ತದೆ.
ಡ್ರೈವ್ ಬೆಲ್ಟ್ ಸವೆಯುವುದು ಅಥವಾ ಗಟ್ಟಿಯಾಗುವುದು ಜಾರುವಿಕೆಗೆ ಕಾರಣವಾಗಬಹುದು, ಇದರಿಂದ ವಿದ್ಯುತ್ ನಷ್ಟ ಮತ್ತು ಇಂಧನ ಬಳಕೆ ಹೆಚ್ಚಾಗುತ್ತದೆ.
HGPಯ ಡ್ರೈವ್ ಬೆಲ್ಟ್ ಫೈಬರ್ ಅನ್ನು ಒಳಗೊಂಡಿರುವ ಸಿಂಥೆಟಿಕ್ ರಬ್ಬರ್ನೊಂದಿಗಿನ ಒಂದು ಹಲ್ಲುಗಳಿರುವ ಚಕ್ರದ ಬೆಲ್ಟ್ ಆಗಿದ್ದು, ಹೆಚ್ಚಿನ ಘರ್ಷಣೆ, ಬಿಸಿ ಮತ್ತು ಓಜೋನ್ ಅನ್ನು ಸಹಿಸಿಕೊಂಡು ಒಂದು ಸುಗಮವಾದ ಪ್ರಯಾಣ ಮತ್ತು ಒಂದು ಸುದೀರ್ಘ ಸರ್ವೀಸ್ ಲೈಫ್ ಅನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ
ಸರ್ವೀಸ್ ಮಿತಿಯನ್ನು ಮೀರಿದ ನಂತರ ಬ್ರೇಕ್ ಶೂಗಳು / ಪ್ಯಾಡ್ಗಳನ್ನು ಬಳಸುವುದರಿಂದ ಕಡಿಮೆ ಘರ್ಷಣೆಯಿಂದಾಗಿ ಬ್ರೇಕ್ ಕಡಿಮೆ ಪರಿಣಾಮಕಾರಿಯಾಗುತ್ತದೆ. ಅತಿಯಾದ ಸವೆತವು ಬ್ರೇಕ್ ಶೂಗಳು / ಪ್ಯಾಡ್ಗಳ ಲೋಹದ ಭಾಗವು ಡ್ರಮ್ / ಡಿಸ್ಕ್ನೊಂದಿಗೆ ಸಂಪರ್ಕಕ್ಕೆ ಬರಲು ಕಾರಣವಾಗುತ್ತದೆ ಮತ್ತು ಇದರಿಂದಾಗಿ ಅದು ಹಾನಿಗೊಳಗಾಗುವುದರಿಂದ ದುರಸ್ತಿ ವೆಚ್ಚ ಹೆಚ್ಚಾಗುತ್ತದೆ, ಮುಖ್ಯವಾಗಿ ಸವಾರರ ಸುರಕ್ಷತೆ.
ಹೆಚ್ಚಿದ ಬ್ರೇಕಿಂಗ್ ಎಫರ್ಟ್ ಮತ್ತು ಅಸಹಜ ಕಿರುಚುವ ಶಬ್ದವು ಬ್ರೇಕ್ ಶೂ, ಪ್ಯಾಡ್, ಡ್ರಮ್ ಅಥವಾ ಡಿಸ್ಕ್ಗಳ ರಿಪ್ಲೇಸ್ಮೆಂಟ್ ಸೂಚಕಗಳಾಗಿವೆ.
HGP ಬ್ರೇಕ್ ಶೂಗಳು / ಪ್ಯಾಡ್ಗಳು / ಡ್ರಮ್ / ಡಿಸ್ಕ್ ಗಳನ್ನು ಸವಾರರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಉನ್ನತ ಗುಣಮಟ್ಟದಲ್ಲಿ ತಯಾರಿಸಲಾಗಿದೆ. ಒಂದು ಸ್ವಚ್ಛ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ಬೂಟುಗಳು / ಪ್ಯಾಡ್ಗಳಲ್ಲಿ ಫೈಬರ್ ಅಂಶಗಳು ಅಲ್ಲದ ಘರ್ಷಣೆಯ ವಸ್ತುಗಳನ್ನು ಬಳಸುವುದು ಮುಂತಾದ ಫೀಚರ್ಸ್ ನಿಮ್ಮ ಹೀರೋ ಟೂ ವೀಲರ್ಗೆ ಉತ್ತಮ ಪರಿಹಾರವಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ವಿಪರೀತವಾಗಿ ಸವೆದ ಚೈನ್ ಸ್ಪ್ರಾಕೆಟ್ನೊಂದಿಗೆ ನಿರಂತರವಾಗಿ ಮೆಶ್ ಆಗದಿರಬಹುದು, ಇದರಿಂದಾಗಿ ಕ್ಯಾಮ್ ಚೈನ್ ಶಬ್ದಮಾಡುತ್ತದೆ ಮತ್ತು ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ವಿಪರೀತ ಸಂದರ್ಭಗಳಲ್ಲಿ ಚೈನ್ ತುಂಡಾಗಿ ಗಂಭೀರವಾದ ಎಂಜಿನ್ ಹಾನಿ ಮತ್ತು ಸವಾರರ ಸುರಕ್ಷತೆಗೆ ಒಂದು ಅಪಾಯವನ್ನು ತಂದೊಡ್ಡುತ್ತದೆ.
HGP ಕ್ಯಾಮ್ ಚೈನ್ ಕಿಟ್ ಅನ್ನು ಎಂಜಿನ್ ಕಾರ್ಯಾಚರಣೆಯ ಸಮಯದಲ್ಲಿ ಅಧಿಕ ಆರ್ಡರಿನ ಒತ್ತಡವನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಇದು ಎಂಜಿನ್ ದಕ್ಷತೆಯನ್ನು ಕೂಡ ಹೆಚ್ಚಿಸುತ್ತದೆ. ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಫ್ರಿಕ್ಷನ್ ಡಿಸ್ಕ್ಗಳನ್ನು ಸಾಮಾನ್ಯವಾಗಿ ಅಲ್ಯೂಮಿನಿಯಂ ಫಲಕಗಳು ಮತ್ತು ಅವುಗಳ ಮೇಲೆ ಅಂಟಿಸಲಾದ ಘರ್ಷಣೆಯ ಮೆಟೀರಿಯಲ್ಗಳೊಂದಿಗೆ ನಿರ್ಮಿಸಲಾಗುತ್ತದೆ. ಅವುಗಳು ಕ್ಲಚ್ ಪ್ಲೇಟ್ಗಳೊಂದಿಗೆ ಘರ್ಷಣೆಯ ಬಲದಿಂದ ಎಂಜಿನ್ನಿಂದ ಟ್ರಾನ್ಸ್ಮಿಷನ್ಗೆ ಶಕ್ತಿಯನ್ನು ರವಾನಿಸುತ್ತವೆ.
CFD (ಕ್ಲಚ್ ಫ್ರಿಕ್ಷನ್ ಡಿಸ್ಕ್) ಒಂದು ಕಾಲಾವಧಿಯಲ್ಲಿ ಸವೆದುಹೋಗುತ್ತದೆ, ಮತ್ತು ಸವೆತವು ಸರ್ವೀಸ್ ಮಿತಿಯನ್ನು ಮೀರಿದಾಗ ಅದನ್ನು ರಿಪ್ಲೇಸ್ ಮಾಡಬೇಕು. ಪ್ರಾಥಮಿಕ ಕಿಕ್ ಸ್ಟಾರ್ಟ್ ಹೊಂದಿರುವ ವಾಹನಗಳನ್ನು ಕಿಕ್ ಸ್ಟಾರ್ಟ್ ಮಾಡುವ ಸಮಯದಲ್ಲಿ ಕಿಕ್ ಜಾರುವಿಕೆಯು CFD ಸವೆದಿರುವ ಮೊದಲ ಸೂಚನೆಯಾಗಿದೆ (100cc ಮತ್ತು 125cc ಕೆಟಗರಿಯಲ್ಲಿ ಎಲ್ಲಾ ಮಾಡೆಲ್ಗಳು).
ಒಂದು ಸವೆದುಹೋದ CFD ಯು ಕ್ಲಚ್ ಜಾರುವಿಕೆಗೆ ಕಾರಣವಾಗಿ ಎಂಜಿನ್ನ ಅಧಿಕ ಹೀಟಿಂಗ್, ಪವರ್ ಕೊರತೆ ಮತ್ತು ಇಂಧನ ಬಳಕೆ ಹೆಚ್ಚಳದೊಂದಿಗೆ ಆಕ್ಸಲರೇಶನ್ಗೆ ದಾರಿಮಾಡಿಕೊಡಬಹುದು. ಕ್ಲಚ್ ಪ್ಲೇಟ್ಗಳು ಮತ್ತು ಪ್ರೆಶರ್ ಪ್ಲೇಟ್ನಂತಹ ಇತರ ಭಾಗಗಳನ್ನು ಕೂಡ ಇದು ಹಾನಿಗೊಳಿಸಬಹುದು.
HGP ಕ್ಲಚ್ ಫ್ರಿಕ್ಷನ್ ಡಿಸ್ಕ್ಗಳು ಅತ್ಯುತ್ತಮ ಅಸ್ಬೆಸ್ಟಾಸ್ ಅಲ್ಲದ ವಸ್ತುಗಳಿಂದ ತಯಾರಿಸಲ್ಪಡುತ್ತವೆ, ಇವು ಅಧಿಕವಾದ ಉಜ್ಜುವ ಶಕ್ತಿಗಳನ್ನು ಸಹಿಸಿಕೊಳ್ಳುವುದು ಮತ್ತು ಬಿಸಿಯನ್ನು ಸಮರ್ಥವಾಗಿ ಇಲ್ಲವಾಗಿಸುವುದಷ್ಟೇ ಅಲ್ಲದೇ ಅಸ್ಬೆಸ್ಟಾಸ್ ಅನುಪಸ್ಥಿತಿಯಿಂದಾಗಿ ಕಡಿಮೆ ಗಾಳಿಯ ಮಾಲಿನ್ಯವನ್ನು ಖಚಿತಪಡಿಸುತ್ತದೆ. ಇದು ಘಟಕದ ದೀರ್ಘಾವಧಿಯ ಸರ್ವೀಸ್ ಲೈಫ್ ಮತ್ತು ಯಾವುದೇ ಆರೋಗ್ಯ ಅಪಾಯಗಳನ್ನು ತಡೆಗಟ್ಟಲು ಕಾರಣವಾಗುತ್ತದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಅತೀ ಸಮೀಪದ ಅಧಿಕೃತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
ಥ್ರೋಟಲ್ ಕೇಬಲ್ ಮತ್ತು ಲಿಂಕೇಜ್ ಸವೆಯಬಹುದು ಮತ್ತು ಆ ನಂತರ ಒಂದು ದೀರ್ಘಕಾಲದ ಬಳಕೆಯಲ್ಲಿ ಹಾನಿಗೊಳಗಾಗಬಹುದು. ಪರಿಸರಕ್ಕೆ ಒಡ್ಡಿಕೊಳ್ಳುವುದರಿಂದ ಅವು ತುಕ್ಕು ಹಿಡಿಯಬಹುದು ಮತ್ತು ಕ್ಷೀಣಿಸಬಹುದು. ಥ್ರೋಟಲ್ ಕಾರ್ಯಾಚರಣೆಯು ಜಿಗುಟಾಗಿ ಪರಿಣಮಿಸಬಹುದು ಮತ್ತು ಥ್ರೋಟಲ್ ಬಿಡುಗಡೆಯಾದಾಗಲೂ ಹೆಚ್ಚಿನ ವೇಗದಲ್ಲಿ ಎಂಜಿನ್ ಅನ್ನು ಚಲಾಯಿಸುವಾಗ ಥ್ರೋಟಲ್ ವಾಲ್ವ್ ಸರಾಗವಾಗಿ ಮರಳಲು ವಿಫಲವಾಗುತ್ತದೆ.
ಕ್ರಮವಲ್ಲದ ಐಡ್ಲಿಂಗ್ ಹೆಚ್ಚಿನ ಫ್ಯೂಯಲ್ ಬಳಕೆ ಮತ್ತು ಎಂಜಿನ್ನ ಅಧಿಕ ಬಿಸಿಗೆ ಕಾರಣವಾಗಬಹುದು. ಕೆಲವು ವಿಪರೀತ ಎನ್ನುವಂತಹ ಸಂದರ್ಭಗಳಲ್ಲಿ, ಕ್ಲಚ್ ಬಿಡುಗಡೆ ಮಾಡಿದಾಗ ವಾಹನದ ನಿಯಂತ್ರಣವನ್ನು ಕಳೆದುಕೊಳ್ಳಬಹುದು ಅಥವಾ ವಾಹನ ಅಡ್ಡಾದಿಡ್ಡಿಯಾಗಿ ಹೋದಾಗ ಸವಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡಬಹುದು.
ಮಾಡೆಲ್ ಕಾನ್ಫಿಗರೇಶನ್ ಆಧಾರದ ಮೇಲೆ ಹೀರೋ 2 ವೀಲರ್ ಗಾಗಿ HGP ಥ್ರೋಟಲ್ ಕೇಬಲ್ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೇಬಲ್ಗಳನ್ನು ನಯವಾದ ಕಾರ್ಯಾಚರಣೆ ಮತ್ತು ದೀರ್ಘಕಾಲದ ಸರ್ವೀಸ್ ಲೈಫಿಗಾಗಿ ಆಂತರಿಕವಾಗಿ ಲೂಬ್ರಿಕೇಟ್ ಮಾಡಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಕ್ಲಚ್ ಅಸೆಂಬ್ಲಿಗಳು ದೀರ್ಘಕಾಲ ಮತ್ತು ಸಂಪರ್ಕಕ್ಕೆ ಕಾರಣವಾಗುವ ಕ್ಲಚ್ ಕಾರ್ಯನಿರ್ವಹಣೆಗಾಗಿ ಕೇಬಲ್ ಬಳಸುತ್ತವೆ ಮತ್ತು ಲಿಂಕೇಜ್ ದೀರ್ಘಾವಧಿಯ ಬಳಕೆಯ ನಂತರ ಸವೆಯಬಹುದು ಅಥವಾ ಹಾನಿಗೊಳಗಾಗಬಹುದು. ಕ್ಲಚ್ ಕೇಬಲ್ ಸ್ಟ್ರೆಚ್ ಆದಾಗ, ಕ್ಲಚ್ ಫ್ರೀ-ಪ್ಲೇ ಅಧಿಕವಾಗುತ್ತದೆ.
ಇದು ಕ್ಲಚ್ ತೊಡಗಿಸಿಕೊಳ್ಳುವುದನ್ನು ಅಪೂರ್ಣಗೊಳಿಸುತ್ತದೆ, ಇದರಿಂದ ಗೇರ್ ಶಿಫ್ಟಿಂಗ್ ಕಾರ್ಯಾಚರಣೆಗೆ ಕಷ್ಟವಾಗುತ್ತದೆ ಮತ್ತು ಗೇರ್ನಲ್ಲಿ ತೊಡಗಿರುವ ಟ್ರಾನ್ಸ್ಮಿಷನ್ ಜತೆಗೆ ಸ್ಟೇಷನರಿ ಪೊಸಿಶನ್ನಲ್ಲಿದ್ದಾಗ ಕ್ಲಚ್ ಎಳೆಯಲ್ಪಡುತ್ತದೆ. ಕೆಲವು ವಿಪರೀತ ಎಂಬಂತಹ ಸಂದರ್ಭಗಳಲ್ಲಿ, ಲಿಂಕೇಜ್ಗಳಿಂದ ಕೇಬಲ್ ಮುರಿದುಹೋದರೆ ಅದು ವಾಹನಕ್ಕೆ ಮತ್ತು ಸವಾರರ ಸುರಕ್ಷತೆಗೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ನಿಯತಕಾಲಿಕವಾದ ತಪಾಸಣೆ ಅಥವಾ ರಿಪ್ಲೇಸ್ಮೆಂಟ್ ಬಹಳ ಮುಖ್ಯವಾಗಿದೆ.
ನೈಜವಲ್ಲದ ಕೇಬಲ್ ಸರಿ ಅಲ್ಲದ ಫ್ರೀ- ಪ್ಲೇಗೆ ಮತ್ತು ಗೇರ್ ಶಿಫ್ಟಿಂಗ್ನ ಕಠಿಣತೆಗೆ ಕಾರಣವಾಗಬಹುದು. ಆದ್ದರಿಂದ, ಪ್ರತಿ ಮಾಡೆಲ್ಗಳ ನಿರ್ದಿಷ್ಟತೆಗಳನ್ನು ಪ್ರತ್ಯೇಕವಾಗಿ ಮನಸ್ಸಿನಲ್ಲಿಟ್ಟುಕೊಂಡು HGP ಕ್ಲಚ್ ಕೇಬಲ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಸುಗಮ ಕಾರ್ಯಾಚರಣೆ ಮತ್ತು ಸುದೀರ್ಘ ಸರ್ವೀಸ್ ಲೈಫ್ ಅನ್ನು ಹೊಂದಿರುವ HGP ಕ್ಲಚ್ ಕೇಬಲ್ಗಳನ್ನು ಆಂತರಿಕವಾಗಿ ಲ್ಯೂಬ್ರಿಕೇಟ್ ಮಾಡಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಇಂಧನದಲ್ಲಿನ ಕಲ್ಮಶಗಳಿಂದಾಗಿ ಇಂಧನ ಸ್ಟ್ರೈನರ್ ಒಂದೋ ಸ್ಕ್ರೀನನ್ನು ಮುಚ್ಚಿಹಾಕಬಹುದು ಅಥವಾ ಹಾನಿಗೊಳಗಾಗಬಹುದು. ಒಂದು ಮುಚ್ಚಿಹೋಗಿರುವ ಇಂಧನ ಸ್ಟ್ರೈನರ್ನ ಸಂದರ್ಭದಲ್ಲಿ, ಕಾರ್ಬ್ಯುರೇಟರ್ನಲ್ಲಿ ಫ್ಯೂಯಲ್ ಮಟ್ಟವು ಸಾಕಾಗುವುದಿಲ್ಲ (ವಿಶೇಷವಾಗಿ ಹೆಚ್ಚಿನ ವೇಗದ ಕಾರ್ಯಾಚರಣೆಯ ಸಮಯದಲ್ಲಿ) ಮತ್ತು ಸ್ಟ್ರೈನರ್ ಹಾನಿಗೊಳಗಾದಾಗ ಮತ್ತು ಕಲ್ಮಶಗಳನ್ನು ಪರೀಕ್ಷಿಸದ / ಫಿಲ್ಟರ್ ಮಾಡದಿದ್ದಲ್ಲಿ, ಅದು ಕಾರ್ಬ್ಯುರೇಟರ್ನಲ್ಲಿ ಜೆಟ್ಗಳನ್ನು ಮುಚ್ಚಿಹಾಕುತ್ತದೆ. ಎರಡೂ ಸಂದರ್ಭಗಳಲ್ಲಿ, ಏರ್ ಫ್ಯೂಯಲ್ ಅನುಪಾತದಲ್ಲಿ ವ್ಯತ್ಯಾಸವಿರುತ್ತದೆ, ಇದರಿಂದಾಗಿ ಮದ್ಯಂತರದಿಂದ ಹೆಚ್ಚಿನ ವೇಗದ ಕಾರ್ಯಾಚರಣೆಯಲ್ಲಿ ಕಡಿಮೆಯಾದ ಪವರ್ ಮತ್ತು ಸ್ಟಾರ್ಟಿಂಗ್ ಟ್ರಬಲ್ಗೆ ಕಾರಣವಾಗುತ್ತದೆ.
HGPಯ ಫ್ಯೂಯಲ್ ಸ್ಟ್ರೈನರ್ ಸ್ಕ್ರೀನ್ ಫ್ಯೂಯಲ್ ಪ್ರವೇಶಿಸುವ ಕಾರ್ಬ್ಯುರೇಟರ್ನ ಅಧಿಕ ಫಿಲ್ಟರೇಶನ್ನ ಭರವಸೆ ನೀಡುತ್ತದೆ. ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ನಿಮ್ಮ ಹತ್ತಿರದ ಅಧಿಕೃತ ವರ್ಕ್ಶಾಪ್ ಅನ್ನು ಭೇಟಿ ಮಾಡಿ.
ಕೆಲವು ಸಮಯದ ನಂತರ ಬ್ರೇಕ್ ಫ್ಲೂಯಿಡ್ ಬ್ರೇಕ್ ಕೊಳವೆಯ ಮೂಲಕ ತೇವವನ್ನು ಹೀರಿಕೊಳ್ಳುತ್ತದೆ, ಅದರ ಬಾಯ್ಲಿಂಗ್ ಪಾಯಿಂಟ್ ಕ್ರಮೇಣ ಕ್ಷೀಣವಾಗುತ್ತಾ ಬರುತ್ತದೆ. ಹೀರಿಕೊಂಡ ತೇವ "ವೇಪರ್ ಲಾಕ್" ನ ಟೆಂಂಡೆನ್ಸಿಯನ್ನು ಹಿಗ್ಗಿಸುತ್ತದೆ, ಇದು ಬ್ರೇಕಿಂಗ್ ಸಿಸ್ಟಮ್ನಲ್ಲಿ ಹೀಟ್ ಉತ್ಪಾದನೆಯಾದಾಗ ಬ್ರೇಕ್ ಫ್ಲೂಯಿಡ್ ಬಾಯಿಲ್ನಲ್ಲಿ ಕಂಡುಬರುವ ತೇವದಿಂದ ಸಂಭವಿಸುವ ವಿದ್ಯಾಮಾನವಾಗಿದೆ ಮತ್ತು ಈ ನೀರಿನ ಗುಳ್ಳೆ ಉತ್ಪಾದನೆಯಾಗಲು ಆರಂಭವಾಗುವುದರಿಂದ ಬ್ರೇಕ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಇದು ಬ್ರೇಕಿಂಗ್ ಸಿಸ್ಟಮ್ನ ಒಳಭಾಗಗಳಲ್ಲ್ಲಿ ತುಕ್ಕು ಹಿಡಿಯುವುದಕ್ಕೆ ಕೂಡ ಕಾರಣವಾಗಿ ಅದು ಕ್ರಿಯಾತ್ಮಕವಾಗಿ ದುರ್ಬಲವಾಗಬಹುದು. ಬ್ರೇಕಿಂಗ್ನಲ್ಲಿ ಹೀಟ್ ಉತ್ಪಾದನೆಯಾಗುವುದರಿಂದ ಬ್ರೇಕ್ ಫ್ಲೂಯಿಡ್ ಕೂಡ ಹದಗೆಡಬಹುದು.
ಸಾಮಾನ್ಯವಾಗಿ, ಇದನ್ನು 30000ಕಿಲೋ ಮೀಟರ್ಗಳ ನಂತರ ಅಥವಾ 2 ವರ್ಷಗಳ ನಂತರ ಬದಲಾವಣೆ ಮಾಡಬೇಕು. ಶಿಫಾರಸು ಮಾಡಲಾದ ಸೀಲ್ ಮಾಡಿದ ಕಂಟೇನರ್ನಿಂದ (ಡಾಟ್3 / ಡಾಟ್ 4) ಬ್ರೇಕ್ ಫ್ಲೂಯಿಡ್ ಅನ್ನು ಬಳಸುವುದರಿಂದ ಗರಿಷ್ಠ ಸುರಕ್ಷತಾ ಮಾನದಂಡಗಳ ಅನುಸರಣೆ ಮಾಡಿದಂತಾಗುತ್ತದೆ. ಒಂದು ಬಾರಿ ಬ್ರೇಕ್ ಫ್ಲೂಯಿಡ್ನ ಮಟ್ಟವು ಕಡಿಮೆಯಾದಾಗ ಬ್ರೇಕ್ ಫ್ಲೂಯಿಡ್ ಅನ್ನು ಇನ್ನೊಮ್ಮೆ ತುಂಬಿಸಲು ಶಿಫಾರಸು ಮಾಡಲಾಗುತ್ತದೆ. ಡಾಟ್ 3 & ಡಾಟ್ 4 ಬ್ರೇಕ್ ಫ್ಲೂಯಿಡ್ ಅನ್ನು ಮಿಕ್ಸ್ ಮಾಡಬೇಡಿ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ರೋಡ್ನಿಂದ ಉತ್ಪಾದನೆಯಾಗುವ ಶಾಕ್ಗಳು ಬ್ರೇಕಿಂಗ್ ಮತ್ತು ಮುಂಭಾಗದ ಚಕ್ರದ ಹೊರೆಗಳಿಂದಾಗಿ ಸ್ಟೇರಿಂಗ್ (ಹ್ಯಾಂಡಲ್ಬಾರ್) ಬೇರಿಂಗ್ಸ್ ನಡುಗಬಹುದು ಅಥವಾ ಲೂಸ್ ಆಗಬಹುದು. ವಿಪರೀತ ಎನ್ನುವಂತಹ ಸಂದರ್ಭದಲ್ಲಿ ಮೇಲೇರುವ ಸೆಕ್ಷನ್ಗಳು / ಬೇರಿಂಗ್ ಭಾಗಗಳು ಡ್ಯಾಮೇಜ್ ಆಗಬಹುದು ಮತ್ತು ಲ್ಯೂಬ್ರಿಕೆಂಟಿನ ಅಸಮರ್ಪಕ ಇರುವಿಕೆಯಿಂದಾಗಿ ಸುರಕ್ಷಿತವಾಗಿ ಸಾಗುವುದನ್ನು ಕಷ್ಟವಾಗಿಸಬಹುದು ಮತ್ತು ಸ್ಟೇರಿಂಗ್ ಸದ್ದು ನೀಡುತ್ತಿರಬಹುದು.
HGP ಯ ಬಾಲ್ ರೇಸ್ ಕಿಟ್ ಮತ್ತು ಲ್ಯೂಬ್ರಿಕೆಂಟ್ ನಿಮಗೆ ತೊಂದರೆ ರಹಿತ ದೀರ್ಘ ಬಾಳಿಕೆಯ ಕಾರ್ಯಕ್ಷಮತೆಯ ಭರವಸೆಯನ್ನು ನೀಡುತ್ತದೆ. ಈ ಐಟಂಗಳನ್ನು ವಿಶೇಷವಾಗಿ ಉತ್ತಮ ಲ್ಯೂಬ್ರಿಕೇಶನ್ಗಾಗಿ ಶಿಫಾರಸು ಮಾಡಲಾಗಿದೆ ಮತ್ತು ಸ್ಟೀರಿಂಗ್ ಭಾಗಗಳ ಬಾಳಿಕೆಯನ್ನು ವಿಸ್ತರಿಸುತ್ತದೆ.
ಪ್ರತಿ 3000 ಕಿಲೋಮೀಟರ್ಗಳಲ್ಲಿ ಸ್ಟೀರಿಂಗ್ ಅನ್ನು ಪರಿಶೀಲಿಸಬೇಕು ಮತ್ತು ಹೊಂದಾಣಿಕೆ ಮಾಡಬೇಕು ಮತ್ತು ಪ್ರತಿ 12,000 ಕಿಲೋಮೀಟರ್ಗಳಿಗೆ ಒಂದು ಬಾರಿ ಲ್ಯೂಬ್ರಿಕೇಟ್ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಶಾಕ್ ಹೀರಕಗಳು ರೋಡಿನ ಮೇಲ್ಭಾಗದ ಶಾಕ್ಗಳನ್ನು ಹೀರಿಕೊಳ್ಳುತ್ತವೆ. ಇದು ರೈಡಿಂಗ್ ಕಂಫರ್ಟ್ ಮತ್ತು ಸ್ಥಿರತೆಯನ್ನು ವೃದ್ಧಿಸುತ್ತದೆ. ಶಾಕ್ ಹೀರಕಗಳು ಕೆಟ್ಟುಹೋದಾಗ, ಕಡಿಮೆ ಕಂಟ್ರೋಲಿನೊಂದಿಗೆ ಬಂಪಿಯರ್ ರೈಡಿಂಗ್ ಅನ್ನು ನೀವು ಗುರುತಿಸಬಹುದು. ಇದು ಟೈರ್ಗಳು ಬೇಗನೆ ಸುಸ್ತಾಗುವುದಕ್ಕೆ ಕಾರಣವಾಗಬಹುದು.
HGP ಶಿಫಾರಸು ಮಾಡಲಾದ ಸಸ್ಪೆನ್ಶನ್ ಘಟಕಗಳ ಬಳಕೆಯಿಂದ ದೀರ್ಘ ಸರ್ವೀಸ್ ಲೈಫಿನೊಂದಿಗೆ ನಯವಾದ, ಸ್ಥಿರ ಮತ್ತು ಸುರಕ್ಷಿತ ರೈಡ್ ಸಾಧ್ಯವಾಗುತ್ತದೆ.
ಶಾಕ್ ಹೀರಕ ಆಯಿಲ್ಗಳನ್ನು (ಮುಂಭಾಗ) ಪ್ರತಿ 30,000 ಕಿಲೋ ಮೀಟರ್ಗೆ ಒಂದು ಬಾರಿ ರಿಪ್ಲೇಸ್ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ನೈಜವಲ್ಲದ ಬಲ್ಬ್ಗಳು ಕಾರ್ಯಾಚರಣೆಯ ಸ್ವರೂಪದಲ್ಲಿ ಬೇಗನೆ ಹದಗೆಡುತ್ತದೆ. ಸ್ವಲ್ಪ ಸಮಯದಲ್ಲೇ ಬೆಳಕು ಮಂದವಾಗುವುದರೊಂದಿಗೆ ಇದನ್ನು ಕಾಣಬಹುದು. ಇದು ಸಾಮಾನ್ಯಕ್ಕಿಂತ ಅಧಿಕವಾಗಿ ಪವರ್ ಅನ್ನು ಬಳಸಿಕೊಳ್ಳುತ್ತದೆ ಮತ್ತು ಬ್ಯಾಟರಿ ಬಳಕೆಗೆ ಬಾರದಂತಾಗುತ್ತದೆ. ಸರಿಯಾದ ವ್ಯಾಟೇಜಿನೊಂದಿಗಿನ ಬಲ್ಬ್ ಅನ್ನು ರಿಪ್ಲೇಸ್ ಮಾಡುವಂತೆ ಶಿಫಾರಸು ಮಾಡಲಾಗಿದೆ.
HGPಯ ಬಲ್ಬ್ಗಳು ಪ್ರಕಾಶಮಾನವಾದ ಬೆಳಕು, ದೀರ್ಘ ಬಾಳಿಕೆ ಮತ್ತು ಸರಿಯಾದ ಚಾರ್ಜಿಂಗ್ ಜತೆಗಿನ ದಕ್ಷ ವಿದ್ಯುತ್ ಬಳಕೆ ಮತ್ತು ಬ್ಯಾಟರಿಯ ವಿಸ್ತರಿತ ಕಾರ್ಯಕ್ಷಮತೆಯ ಭರವಸೆಯನ್ನು ನೀಡುತ್ತದೆ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಕಳೆದು ಹೋದ ಭಾಗಕ್ಕಷ್ಟೇ ಎಂಜಿನ್ ಆಯಿಲ್ ರಿಫಿಲ್ ಮಾಡಿದರೆ, ಎಂಜಿನ್ನಲ್ಲಿ ಉಳಿದಿರುವ ಹಳೆಯ ಆಯಿಲ್ನೊಂದಿಗೆ ಹೊಸ ಆಯಿಲ್ ಮಿಕ್ಸ್ ಆಗುತ್ತದೆ. ಎಂಜಿನ್ ಕಾರ್ಯಕ್ಷಮತೆಯನ್ನು ತಾತ್ಕಾಲಿಕವಾಗಿ ರಿಸ್ಟೋರ್ ಮಾಡಿದರೂ, ಕೆಸರು ಮತ್ತು ಮಸಿ ಎಂಜಿನ್ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಶಿಫಾರಸು ಮಾಡಲಾದ ಶೆಡ್ಯೂಲ್ ಮತ್ತು ಟಾಪ್ ಅಪ್ ಪ್ರಕಾರ ಕಂಪ್ಲೀಟ್ ಎಂಜಿನ್ ಆಯಿಲ್ ಅನ್ನು ಬದಲಾಯಿಸುವುದು ಯಾವಾಗಲೂ ಉತ್ತಮವಾಗಿದೆ. ಜತೆಗೆ, ಎಂಜಿನ್ ಆಯಿಲ್ ಕಳೆದುಹೋಗುವ ಕಾರಣಗಳನ್ನು ಪರಿಶೀಲಿಸಿದ ನಂತರ ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ಅದು ಪುನರಾವರ್ತನೆಯಾಗುವುದಿಲ್ಲ.
ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ನಿಮ್ಮ ಸಮೀಪದ ಅಧಿಕೃತ ವರ್ಕ್ಶಾಪಿಗೆ ಭೇಟಿ ನೀಡಿ.
ಗುಡ್ಲೈಫ್ ಇನ್ಸ್ಟಾ ಕಾರ್ಡಿನ ಹೊಸ ಮೌಲ್ಯ ಪ್ರತಿಪಾದನೆಯ ಅಡಿಯಲ್ಲಿ ಎಲ್ಲಾ ಗುಡ್ಲೈಫ್ ಸದಸ್ಯರು ಈ ಕೆಳಗಿನ ಹಂತಗಳ ಪ್ರಕಾರ ಪಾರ್ಟ್ಗಳ ರಿಯಾಯಿತಿ ಪಡೆಯಬಹುದು:
ಗೋಲ್ಡ್ ಸದಸ್ಯರು (0-5000 ಪಾಯಿಂಟ್ಗಳು) - 2% ರಿಯಾಯಿತಿ
ಪ್ಲಾಟಿನಂ ಸದಸ್ಯರು (5001- 50000 ಪಾಯಿಂಟ್ಗಳು) - 3% ರಿಯಾಯಿತಿ
ಡೈಮಂಡ್ ಸದಸ್ಯರು (>50000 ಪಾಯಿಂಟ್ಗಳು) - 5% ರಿಯಾಯಿತಿ
ಹೊಸ ಪಾರ್ಟ್ಗಳ ರಿಯಾಯಿತಿ ಅವರ ದಾಖಲಾತಿ ಸಮಯದಲ್ಲಿ ಇನ್ಸ್ಟಾ ಕಾರ್ಡ್ ದೊರೆತ ಗ್ರಾಹಕರಿಗೆ ಮಾತ್ರ ಮಾನ್ಯವಾಗಿರುತ್ತದೆ. ಹಳೆಯ ಗ್ರಾಹಕರು hgp ಮೇಲೆ 5% ರಿಯಾಯಿತಿಯನ್ನು ಪಡೆಯುವುದು ಮುಂದುವರಿಯುತ್ತದೆ.
ನಿಮ್ಮ ಹತ್ತಿರದ ಟಚ್ ಪಾಯಿಂಟ್ ಅನ್ನು ಹುಡುಕಲು ಇಲ್ಲಿ ಕಿಕ್ ಮಾಡಿ.
ಎಂದಿಗೂ ಬೆಳೆಯುತ್ತಿರುವ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು, ವಾಸ್ತವಗಳನ್ನು ಬದಲಾಯಿಸಲು ಗ್ರಾಹಕರ ಟಚ್ ಪಾಯಿಂಟ್ಗಳ ಸಂಪೂರ್ಣ ನೆಟ್ವರ್ಕನ್ನು ನಾವು ನಿರಂತರವಾಗಿ ಬಲಪಡಿಸುತ್ತಿದ್ದೇವೆ. HGP ಯು ಭಾರತದಾದ್ಯಂತ 75 ಕ್ಕೂ ಹೆಚ್ಚು ಭಾಗಗಳ ವಿತರಕರು, 800 ಅಧಿಕೃತ ಡೀಲರ್ಗಳು ಮತ್ತು 1150 ಅಧಿಕೃತ ಸೇವಾ ಕೇಂದ್ರಗಳ ವ್ಯಾಪಕ ನೆಟ್ವರ್ಕ್ ಮೂಲಕ ಮತ್ತು ವಿಶ್ವದಾದ್ಯಂತ 6000 + ಟಚ್ ಪಾಯಿಂಟ್ಗಳ ಮೂಲಕ 18 ದೇಶಗಳಲ್ಲಿ ವಿತರಿಸಲಾಗುತ್ತದೆ. ನಿಮ್ಮ ಹತ್ತಿರದ ಟಚ್ ಪಾಯಿಂಟ್ ಹುಡುಕಲು ಇಲ್ಲಿ ಕ್ಲಿಕ್ ಮಾಡಿ.