ಹೋಮ್ ಗುಡ್‌ಲೈಫ್ ನೋಂದಾಯಿಸುವುದು ಹೇಗೆ
ಮೆನು

ನೋಂದಾಯಿಸುವುದು ಹೇಗೆ

ಹೀರೋ ಗುಡ್‌ಲೈಫ್ ಪ್ರೋಗ್ರಾಮ್ ನಿಮಗೆ ಉತ್ತಮ ರಿವಾರ್ಡ್‌ಗಳು, ಪ್ರಯೋಜನಗಳು ಮತ್ತು ಹಲವಾರು ಆಕರ್ಷಕ ಉಡುಗೊರೆಗಳನ್ನು ನೀಡುತ್ತದೆ, ಅದನ್ನು ವಿಶೇಷವಾಗಿ ನಿಮಗಾಗಿ ಆಯ್ಕೆ ಮಾಡಲಾಗಿದೆ. ಈ ಪ್ರಯೋಜನಗಳನ್ನು ಪಡೆಯಲು, ನೀವು 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಭಾರತೀಯ ಪ್ರಜೆಯಾಗಿರಬೇಕು ಮತ್ತು ನೀವು ಹೀರೋ ಮೋಟೋಕಾರ್ಪ್ ಟೂ ವೀಲರ್ ವಾಹನದ ಮಾಲೀಕರಾಗಿರಬೇಕು.

 

ಆಫ್‌ಲೈನ್‌ನಲ್ಲಿ ನೋಂದಣಿ ಮಾಡುವುದು ಹೇಗೆ

ಕೆಳಗೆ ವಿವರಿಸಲಾದ ಹಂತಗಳನ್ನು ಅನುಸರಿಸಿ ಮತ್ತು ಭಾರತದ ಅತಿದೊಡ್ಡ ರಿವಾರ್ಡ್ ಕಾರ್ಯಕ್ರಮದ ಸದಸ್ಯರಾಗಿ ಸವಲತ್ತುಗಳನ್ನು ಅನುಭವಿಸಲು ಆರಂಭಿಸಿ.

 1. ನಿಮ್ಮ ಹತ್ತಿರದ ಹೀರೋ ಮೋಟೋಕಾರ್ಪ್ ಡೀಲರ್‌ಶಿಪ್‌ ಭೇಟಿ ನೀಡಿ
 2. ಗುಡ್‌‌ಲೈಫ್ ಕಾರ್ಯನಿರ್ವಾಹಕರನ್ನು ಸಂಪರ್ಕಿಸಿ
 3. ಆನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡಿ ಮತ್ತು ಸದಸ್ಯತ್ವ ಶುಲ್ಕವನ್ನು ಪಾವತಿಸಿ.
  1. ₹ 175/- 1 ವರ್ಷದ ಇನ್ಶೂರೆನ್ಸ್ ಪ್ರಯೋಜನ ಮತ್ತು 3 ವರ್ಷಗಳ ಪ್ರೋಗ್ರಾಮ್ ಸದಸ್ಯತ್ವ.
  2. ₹ 275/- 3 ವರ್ಷದ ಇನ್ಶೂರೆನ್ಸ್ ಪ್ರಯೋಜನ ಮತ್ತು 3 ವರ್ಷಗಳ ಪ್ರೋಗ್ರಾಮ್ ಸದಸ್ಯತ್ವ.
 4. ನಿಮ್ಮ ಸದಸ್ಯತ್ವದ ಅವಧಿಯ ಸಮಯಕ್ಕೆ ಸಮನಾದ ಆಕ್ಸಿಡೆಂಟಲ್ ಡೆತ್ ಇನ್ಶೂರೆನ್ಸ್ ಕವರ್‌‌ಗೆ ನೀವು ಅರ್ಹರಾಗಿರುತ್ತೀರಿ.

 

ಆನ್ಲೈನಿನಲ್ಲಿ ನೋಂದಣಿ ಮಾಡುವುದು ಹೇಗೆ

 1. ಆಸಕ್ತ ಹೀರೋ ಟೂ ವೀಲರ್ ಮಾಲೀಕರು/ಗ್ರಾಹಕರು ಈಗ ಹೀರೋ ಮೋಟೋಕಾರ್ಪ್ ವೆಬ್‌ಸೈಟ್ ಮೂಲಕ ಆನ್ಲೈನ್‌ನಲ್ಲಿ ಹೀರೋ ಗುಡ್‌ಲೈಫ್ ಕಾರ್ಯಕ್ರಮದಲ್ಲಿ ನೋಂದಣಿ ಮಾಡಬಹುದು. ಆರಂಭಿಸಲು, ಒಬ್ಬರು ಹೀರೋ ಮೋಟೋಕಾರ್ಪ್ ಸೈಟಿಗೆ ನೋಂದಣಿ ಮಾಡಬೇಕು ಅಥವಾ ಲಾಗಿನ್ ಆಗಬೇಕು.
 2. ಯಶಸ್ವಿ ನೋಂದಣಿ ಮತ್ತು ಲಾಗಿನ್ ನಂತರ, ನೀವು ಗುಡ್‌ಲೈಫ್ ವಿಭಾಗದ ಅಡಿಯಲ್ಲಿ, ಕಾರ್ಯಕ್ರಮದ ಬಗ್ಗೆ ವಿವರಗಳು, ಅದರ ಪ್ರಯೋಜನಗಳು ಮತ್ತು ಹೀರೋ ಗುಡ್‌ಲೈಫ್ ಕಾರ್ಯಕ್ರಮದಲ್ಲಿ "ನೋಂದಾಯಿಸಿ" ಆಯ್ಕೆಯನ್ನು ಕೂಡ ನೋಡಬಹುದು.
 3. ನೀವು ನೋಂದಣಿ ಮಾಡಲು ಬಯಸುವ ಹೀರೋ ಗುಡ್‌ಲೈಫ್ ಸದಸ್ಯತ್ವವನ್ನು ಆಯ್ಕೆಮಾಡಿ. ಈ ಕೆಳಗಿನ ಎರಡು ಆಯ್ಕೆಗಳಲ್ಲಿ ನೀವು ಆಯ್ಕೆ ಮಾಡಬಹುದು:
  1. ₹ 175/- 1 ವರ್ಷದ ಇನ್ಶೂರೆನ್ಸ್ ಪ್ರಯೋಜನ ಮತ್ತು 3 ವರ್ಷಗಳ ಪ್ರೋಗ್ರಾಮ್ ಸದಸ್ಯತ್ವ.
  2. ₹ 275/- 3 ವರ್ಷದ ಇನ್ಶೂರೆನ್ಸ್ ಪ್ರಯೋಜನ ಮತ್ತು 3 ವರ್ಷಗಳ ಪ್ರೋಗ್ರಾಮ್ ಸದಸ್ಯತ್ವ.
 4. ಸದಸ್ಯತ್ವದ ಪ್ರಕಾರದ ಆಯ್ಕೆಯ ಮೇಲೆ, ಸದಸ್ಯತ್ವ ಶುಲ್ಕವನ್ನು ಅದೇ ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ
 5. ನೀವು ನಿಮ್ಮ ನಾಮಿನಿ ವಿವರಗಳೊಂದಿಗೆ ಬೇಸಿಕ್ ಪ್ರೊಫೈಲ್ ಫಾರ್ಮ್ (KYC) ತುಂಬಬೇಕು.
 6. ದಯವಿಟ್ಟು ನಿಮ್ಮ ಫೋಟೋ ಅಪ್ಲೋಡ್ ಮಾಡಿ (ಗರಿಷ್ಠ ಗಾತ್ರ 50 kb). ಇದನ್ನು ನಮ್ಮಿಂದ ಶಿಫಾರಸು ಮಾಡಲಾಗಿದೆ (ಆದರೆ ಅದು ಐಚ್ಛಿಕವಾಗಿದ್ದು, ನೀವು ಅದನ್ನು ಮಾಡಲು ಬಯಸದಿದ್ದರೆ, ಅದು ಸಂಪೂರ್ಣವಾಗಿ ಉತ್ತಮ!)
 7. ಒಮ್ಮೆ ಪ್ರೊಫೈಲ್ ಸಂಪೂರ್ಣವಾಗಿ ತುಂಬಿದ ನಂತರ, ನಿಮ್ಮನ್ನು ಪೇಮೆಂಟ್ ಗೇಟ್‌ವೇಗೆ ಕಳುಹಿಸಲಾಗುತ್ತದೆ, ಅಲ್ಲಿ ನೀವು ಸದಸ್ಯತ್ವ ಶುಲ್ಕದ ಮೇಲೆ ₹ 175 ಅಥವಾ ₹ 275 ಪಾವತಿ ಮಾಡಬಹುದು.
 8. ಯಶಸ್ವಿ ಟ್ರಾನ್ಸಾಕ್ಷನ್ ನಂತರ, ಪಾವತಿ ರಶೀದಿ, ಇನ್ವಾಯ್ಸ್ ಪ್ರತಿ ಮತ್ತು ಗುಡ್‌ಲೈಫ್ ಸದಸ್ಯತ್ವ ವಿವರಗಳೊಂದಿಗೆ ಸ್ವೀಕೃತಿ ಸ್ಲಿಪ್ ಅನ್ನು ನಿಮ್ಮ ನೋಂದಾಯಿತ ಇಮೇಲ್ ID ಗೆ ಕಳುಹಿಸಲಾಗುತ್ತದೆ
 9. ಗುಡ್‌ಲೈಫ್ ಮೆಂಬರ್‌ಶಿಪ್ ಕಾರ್ಡ್ ಮತ್ತು ಕಿಟ್ ಅನ್ನು ಪಾವತಿ ಮಾಡಿದ 15 ದಿನಗಳ ಒಳಗೆ ಒದಗಿಸಲಾದ ಅಂಚೆ ವಿಳಾಸದಲ್ಲಿ ನಿಮಗೆ ಕೊರಿಯರ್ ಮಾಡಲಾಗುತ್ತದೆ.
 10. ಒಂದು ವೇಳೆ ಬಳಕೆದಾರರು ಆನ್ಲೈನ್ ಪ್ರೊಫೈಲ್ ಫಾರ್ಮ್ ತುಂಬುವ ಸಮಯದಲ್ಲಿ ಡಿಜಿಟಲ್ ಕಾರ್ಡಿನ ಆಯ್ಕೆಯನ್ನು ಆರಿಸಿದರೆ, ಇ-ಕಾರ್ಡನ್ನು ಸದಸ್ಯರ ನೋಂದಾಯಿತ ಇಮೇಲ್ id ಗೆ ಕಳುಹಿಸಲಾಗುತ್ತದೆ.
ಹೆಚ್ಚು ತಿಳಿಯಲು ಕರೆ ಮಾಡಿ 18002660018 ಅಥವಾ ಇಲ್ಲಿ ನಮಗೆ ಬರೆಯಿರಿ goodlife@heromotocorp.biz

ಯಶಸ್ವಿ ದಾಖಲಾತಿಯ ನಂತರ, ನೀವು ಇನ್ಸ್ಟಾ ಹೀರೋ ಗುಡ್‌ಲೈಫ್ ಸದಸ್ಯತ್ವ ಕಾರ್ಡ್ ಪಡೆಯುತ್ತೀರಿ, ಇದು ನಿಮ್ಮ ಎಲ್ಲಾ ಅಧಿಕೃತ ಹೀರೋ ಮೋಟೋಕಾರ್ಪ್ ಔಟ್ಲೆಟ್‌ಗಳಲ್ಲಿ ನಿಮ್ಮ ಖರ್ಚುಗಳ ಮೇಲೆ ಪಾಯಿಂಟ್‌ಗಳನ್ನು ಗಳಿಸಲು ಸಹಾಯ ಮಾಡುತ್ತದೆ. ನೀವು ಪಾಯಿಂಟ್‌ಗಳನ್ನು ಸಂಗ್ರಹಿಸಬಹುದು ಮತ್ತು ಅವುಗಳನ್ನು ಶ್ರೇಣಿಯ ಆಕರ್ಷಕ ಮೈಲ್‌ಸ್ಟೋನ್ ರಿವಾರ್ಡ್‌ಗಳು ಅಥವಾ ಹೀರೋ ಸರ್ವೀಸ್/ಸೇಲ್ಸ್ ಅವಾರ್ಡ್ ವೌಚರ್‌ಗಳಿಗಾಗಿ ರಿಡೀಮ್ ಮಾಡಿಕೊಳ್ಳಬಹುದು.

ಈಗ ನೋಂದಾಯಿಸಿ
 • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
 • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
 • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018